ಕಾಕುಪುಷ್ಟಿ

 ಆಹಾರಾಂಶಗಳ ಪೋಷಣೆಯ ವ್ಯತ್ಯಾಸವನ್ನು ಕಾಕು ಪುಷ್ಟಿ (ಮಾಲ್ ನ್ಯೂಟ್ರಿಷನ್) ಎನ್ನುತ್ತಾರೆ.

ಪೋಷಕಾಂಶಗಳ ಕೊರತೆಯಿಂದ ಇಳಿಪುಷ್ಟಿ (ಅಂಡರ್ ನ್ಯೂಟ್ರಿಷನ್)ಹೆಚ್ಚಳದಿಂದ (ಓವರ್ ನ್ಯೂಟ್ರಿಷನ್) ಬೊಜ್ಜು ಉಂಟಾಗುತ್ತದೆ. ಎರಡು ರೀತಿಯ ನ್ಯೂನÀ ಪೋಷಣೆಯಿಂದ ದೇಹಾರೋಗ್ಯ ಕೆಡುತ್ತದೆ. 

 ದೇಹದ ಬೆಳವಣಿಗೆಗೆ  ಮಾಂಸಖಂಡಗಳ ಬಲಕ್ಕೆ, ಪ್ರೋಟಿನ್ ಅತ್ಯಗತ್ಯ ದೇಹದಲ್ಲಾಗುವ ಗಾಯಗಳ ದುರಸ್ತಿ, ರಕ್ತಕಣಗಳ ಉತ್ಪತ್ತಿ, ಜೀವ ದ್ರವ, ಹಾರ್ಮೋನ್ ಎನ್ಜೈಮ್ಗಳ ಉತ್ಪತ್ತಿಗೆ, ರೋಗ ನಿರೋಧಕ ಶಕ್ತಿಯ ಬೆಳವಣಿಗೆ ಇವೆಲ್ಲವಕ್ಕೂ ಪ್ರೋಟೀನ್ ಅತ್ಯಗತ್ಯ. 

 ಧಾನ್ಯ, ಬೇಳೆಕಾಳು, ಮಾಂಸ, ಮೊಟ್ಟೆ, ಮೀನು, ಹಲು, ಸೋಯ, ಅವರೆಯಲ್ಲಿ ಅಧಿಕ ಪ್ರೋಟಿನ್ ಇದೆ. ವಯಸ್ಕರಿಗೆ ಪ್ರತೀ ಕಿಲೋ ದೇಹದ ತೂಕಕ್ಕೆ ಒಂದು ಗ್ರಾಂ (ನಿತ್ಯ) ಪ್ರೋಟಿನ್ ಬೇಕಾಗುತ್ತದೆ. 

 ಬಾಲ್ಯದಲ್ಲಿ ಪ್ರೋಟಿನ್ ಕೊರತೆಯಾದರೆ, ಮಗುವಿನ ದೈಹಿಕ ಮಾನಸಿಕ ಬೆಳವಣಿಗೆ ಕುಂಟಿತವಾಗುತ್ತದೆ. ಮಾಂಸಖಂಡಗಳು ದುರ್ಬಲಗೊಳ್ಳುತ್ತದೆ. ಕೈ, ಕಾಲು ಮುಖ ಬಾತುಕೊಳ್ಳುತ್ತದೆ. ತಲೆ ಕೂದಲು ಕೆಂಪುಬಣ್ಣಕ್ಕೆ ತಿರುಗುತ್ತದೆ. ಕೂದಲುಗಳು ಉದುರುತ್ತದೆ. ಮಗುವಿಗೆ ಬಾಹ್ಯ ಜಗತ್ತಿನ ಆಸಕ್ತಿ ಕಡಿಮೆಯಾಗುತ್ತದೆ. ಮಗುವಿನ ಚರ್ಮ ಬಿಳಿಚಿಕೊಳ್ಳುತ್ತಾ ಸುಲಿದು ಬರುತ್ತದೆ. ಮಗುವಿನ ಮೆದುಳಿನ ಶಕ್ತಿ ತಾತ್ಕಾಲಿಕವಗಿ ಇಲ್ಲವೇ ಶಾಶ್ವತವಾಗಿ ಕಡಿಮೆಯಾತ್ತದೆ.  ಹೀಗೆ ಪ್ರೋಟಿನ್ ಅಬಾವದಿಂದ ಮಕ್ಕಳು ನರಳುವ ಕಾಯಿಲೆಗೆ 'ಕ್ಯಾಶಿಯೋರ್ಕರ್' ಕಾಯಿಲೆ ಎನ್ನುತ್ತಾರೆ. ಕಾಯಿಲೆಯನ್ನು ಆದಷ್ಟು ಬೇಗ ಗುರುತಿಸಿ, ಉತ್ತಮ ಪ್ರೋಟಿನ್‍ಯುಕ್ತ ಆಹಾರ ನೀಡಿದರೆ ಮಗು ಚೇತರಿಸಿಕೊಳ್ಳುತ್ತದೆ. ಅಲಕ್ಷಿಸಿದರೆ ಮಗು ನರಪೇತಲಾಗಿ ಬುದ್ದಿಮಾಂದ್ಯವಾಗಿ ಬೆಳೆಯುತ್ತದೆ. ಅಥವಾ ಸಾಯುತ್ತದೆ.

 ಮಗುವಿಗೆ ಸಾಕಾಗದಷ್ಟು ಶಕ್ತಿ ಆಹಾರದಿಂದ ದೊರೆಯದಿದ್ದರೆ ಮಗುವಿನ ದೇಹದ ಕೊಬ್ಬು ಮಾಂಸಖಂಡ ಎಲ್ಲಾ ಕರಗಿ ಮಗು ಮೂಳೆಗೆ ಚರ್ಮ ಹೊದಿಸಿದಂತೆ ಕಾಣುತ್ತದೆ. ಮುಖ ಕೋತಿಯ ಮುಖದಂತಾಗುತ್ತದೆ. ದೇಹದ ಚರ್ಮ ಸುಕ್ಕುಗಟ್ಟಿ ಜೋಲುತ್ತದೆ. ಈ ಕಾಯಿಲೆಯನ್ನು ಮರಾಸ್ ಮಸ್ ಎನ್ನುತ್ತಾರೆ. ಮಗುವಿಗೆ ತಕ್ಷಣದಿಂದಲೇ ಸಾಕಷ್ಟು ಆಹಾರ ನೀಡಿದರೆ ಮಗು ಬೇಗನೆ ಚೇತರಿಸಿಕೊಳ್ಳುತ್ತದೆ.

 ಮಕ್ಕಳನ್ನು ಸಾಮನ್ಯವಾಗಿ ಕಾಡುವ ಅಪೌಷ್ಟಿಕತೆಯಲ್ಲಿ  ಕ್ಯಾಶಿಯೋರ್ಕರ್ ಹಾಗೂ ಮರಾಸ್ ಮಸ್ ಮುಖ್ಯವಾದವುಗಳು. ಜೀವಸತ್ವ (ವಿಟಮಿನ್) ಗಳ ಕೊರತೆಯಿಂದಲೂ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತದೆ. 'ಎ' ಜೀವಸತ್ವ ದ ಕೊರತೆಯಿಂದ ಮಕ್ಕಳಲ್ಲಿ ಅಂಧತ್ವ ಉಂಟಾಗುತ್ತದೆ. 'ಎ' ಜೀವಸತ್ವ ದ ಕೊರತೆಯ ಆರಂಭದಲ್ಲಿ ಮಗುವಿಗೆ ರಾತ್ರಿಯಲ್ಲಿ ಕಣ್ಣು ಕಾಣುವುದಿಲ್ಲ. ಕೊರತೆಯ ತೀವ್ರತೆ ಹೆಚ್ಚಿದಂತೆ ಕಣ್ಣಿನಲ್ಲಿ ಹೊಳಪು ತೇವಾಂಶ ನಾಶವಾಗುತ್ತದೆ. ಕಣ್ಣಿನಲ್ಲಿ ಬೂದಿಯಂತಹ ಕಣಗಳು ಕಲೆಯುತ್ತವೆ. ಪರಿಸ್ಥಿತಿ ಹಿಗೆಯೇ ಮುಂದುವರಿದರೆ ದೃಷ್ಟಿ ಶಾಶ್ವತವಾಗಿ ನಾಶವಾಗುತ್ತದೆ. 'ಎ' ಜೀವಸತ್ವವುಳ್ಳ ಸೊಪ್ಪು, ತರಕಾರಿ, ಹಣ್ಣು, ನುಗ್ಗೇಕಾಯಿ, ಬೆಣ್ಣೆ ಮುಂತಾದ ಆಹಾರಗಳ ಸೇವನೆಯಿಂದ 'ಎ' ಜೀವಸತ್ವದ ಅಭಾವವನ್ನು ತಡೆಗಟ್ಟಬಹುದು.  'ಎ' ಜೀವಸತ್ವದ ಅಭಾವವನ್ನು ತಡೆಗಟ್ಟಲು  ಸರಕಾರವು ಮಕ್ಕಳಿಗೆ 'ಎ' ಜೀವಸತ್ವದ ದ್ರವವನ್ನು ಕೊಡುವ ಕಾರ್ಯಕ್ರಮವನ್ನು ಹಮ್ಮಿಕೂಂಡಿದೆ. 

 'ಡಿ' ಜೀವಸತ್ವವು  ನಮಗೆ ಸೂರ್ಯನ ಕಿರಣಗಳಿಂದ ದೊರೆಯುತ್ತದೆ. ಇದರ ಅಬಾವದಿಂದ ರೆಕೆಡ್ಸ್ ಎಂಬ ಕಯಿಲೆ ಉಂಟಾಗುತ್ತದೆ. ಮೀನು, ಲಿವರ್ ಎಣ್ಣೆ, ಬೆಣ್ಣೆ ಮೊಟ್ಟೆಯ ಹಳದೀ ಬಾಗದಲ್ಲಿಯೂ 'ಡಿ' ಜೀವಸತ್ವವಿದೆ.  

 'ಇ'   ಜೀವಸತ್ವವು   ಮೊಳಕೆ ಕಾಳು ಎಣ್ಣೆ ಕಾಳು ಮೊಟ್ಟೆಯ ಹಳದಿಯಲ್ಲಿ ಇರುತ್ತದೆ. 'ಇ'   ಜೀವಸತ್ವದ ಅಬಾವದಿಂದ ಬಂಜೆತನ ಪ್ರಾಪ್ತವಾಗಬಹುದು. 'ಬಿ' ಕಾಂಪಲೆಕ್ಸ ಜೀವಸತ್ವದ ಅಬಾವದಿಂದ ಬೆರಿಬೆರಿ, ಪೆಲೆಗ್ರ, ನಾಲಿಗೆ ಕೆಂಪಾಗುವುದು, ಬಾಯಲ್ಲಿ ಹುಣ್ಣಾಗುವುದು, ನರಗಳ ದೌರ್ಬಲ್ಯ ಮತ್ತಿತರ ತೊಂದರೆಗಳು ಉಂಟಾಗುತ್ತದೆ. 'ಸಿ' ಜೀವಸತ್ವದ ಅಬಾವದಿಂದ ಸ್ಪರ್ಶ ರೋಗ ಉಂಟಾಗುತ್ತದೆ.

 ಕಬ್ಬಿಣದ ಕೊರತೆಯಿಂದ ರಕ್ತಹೀನತೆ. ಅಯೋಡಿನ್ ಕೊರತೆಯಿಂದ ಗಳಗಂಡ, ಪ್ಲೂರಿನ್ ಕೊರತೆಯಿಂದ ಹಲ್ಲು ಹುಳುಕು ಉಂಟಾಗುತ್ತದೆ.

 ಜೀವಸತ್ವ ಹಾಗೂ ಲವಣಗಳಿಂದ ಅನ್ಯಕರೀತಿಯ ಅಪೌಷ್ಟಿಕತೆ ಮತ್ತು ಕಾಯಿಲೆಗಳು ಉಂಟಾಗುತ್ತದೆ. ಇವುಗಳ ಹೆಚ್ಚಳದಿಂದಲೂ ಹಲವಾರು ರೀತಿಯ ತೊಂದರೆಗಳು ತಲೆದೋರುತ್ತವೆ.

 ಅತಿ ಹೆಚ್ಚು ಆಹಾರ ಇಲ್ಲವೆ ಕೊಬ್ಬು ಪದಾರ್ಥಗಳನ್ನು ಹೇರಳವಾಗಿ ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಕಲೆಯುತ್ತದೆ. ದೇಹ ಸ್ಥೂಲವಾಗುತ್ತದೆ. ಬೊಜ್ಜಿನಿಂದ ಬಿ.ಪಿ. ಹೃದಯ ರೋಗ ,ಕ್ಯಾನ್ಸರ್ ಹಾಗೂ ಸಕ್ಕರೆ ಕಾಯಿಲೆ, ಉಂಟಾಗುವ ಅಪಾಯವಿರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ